ಕರ್ನಾಟಕದಲ್ಲಿ ಕೃಷಿ ಮಾಡುವ ರೈತರಿಗೆ ನೀರಿನ ಸಮಸ್ಯೆ ದೊಡ್ಡದು. ಮಳೆ ಸರಿಯಾಗಿ ಬಂದಿಲ್ಲ ಅಂದ್ರೆ ಬೆಳೆ ಹಾನಿಯಾಗೋ ಸಾಧ್ಯತೆ ಜಾಸ್ತಿ. ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ‘ಕೃಷಿ ಭಾಗ್ಯ’ ಯೋಜನೆ ಯನ್ನು ಜಾರಿಗೊಳಿಸಿದೆ.
ಈ ಯೋಜನೆಯ ಮೂಲಕ ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಬಹುದು. ಈ ನೀರನ್ನು ನಂತರ ಬೆಳೆಗಳಿಗೆ ಬಳಸಿಕೊಳ್ಳಬಹುದು.
ವಾಟ್ಸಾಪ್ ಮತ್ತು ಟೆಲಿಗ್ರಾಮ್ ಲಿಂಕ್ ಅನ್ನು ಕೊಟ್ಟಿದ್ದೇನೆ ದಯವಿಟ್ಟು ಹೋಗಿ ಜಾಯಿನ್ ಆಗಿ.
ಅರ್ಜಿ ಹೇಗೆ ಸಲ್ಲಿಸಬೇಕು?
ಈ ಯೋಜನೆಗೆ ಆನ್‌ಲೈನ್ ಅರ್ಜಿ ಇಲ್ಲ. ನೇರವಾಗಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕು.
- ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್, ಪಹಣಿ (RTC), ಬ್ಯಾಂಕ್ ಪಾಸ್‌ಬುಕ್ - ಅರ್ಜಿ ಸಲ್ಲಿಸುವ ಸ್ಥಳ:
ನಿಮ್ಮ ಗ್ರಾಮದ ಹತ್ತಿರದ ರೈತ ಸಂಪರ್ಕ ಕೇಂದ್ರ (RSK) ಅಥವಾ
ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ
👉 ಇಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಕೊಡಲಾಗುತ್ತದೆ. ಆದ್ದರಿಂದ ತಡ ಮಾಡದೇ ಅರ್ಜಿ ಹಾಕುವುದು ಒಳ್ಳೆಯದು.
ಎಷ್ಟು ಸಬ್ಸಿಡಿ ಸಿಗುತ್ತದೆ?
ಸರ್ಕಾರ ಈ ಯೋಜನೆಯಲ್ಲಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ವೆಚ್ಚವನ್ನು ತಾನೇ ಭರಿಸುತ್ತದೆ.
- SC/ST ರೈತರಿಗೆ: ಶೇ. 90% ವರೆಗೆ ಸಬ್ಸಿಡಿ
- ಇತರ ರೈತರಿಗೆ: ಶೇ. 80% ವರೆಗೆ ಸಬ್ಸಿಡಿ
ಅಂದರೆ ರೈತರಿಗೆ ತಮ್ಮ ಜೇಬಿನಿಂದ ಹಾಕಬೇಕಾದ ಹಣ ತುಂಬಾ ಕಡಿಮೆ.
ಹೊಂಡದ ಜೊತೆಗೆ ಇನ್ನೇನು ಸೌಲಭ್ಯ ಸಿಗುತ್ತದೆ?
ಕೇವಲ ಹೊಂಡ ಮಾತ್ರ ಅಲ್ಲ. ಹೊಂಡದ ನೀರನ್ನು ಉಪಯೋಗಿಸಲು ಬೇಕಾದ ಕೆಲವು ಸೌಲಭ್ಯಗಳಿಗೂ ಸಹಾಯ ಸಿಗುತ್ತದೆ:
- ನೀರು ಹಿಡಿದಿಡಲು ಪಾಲಿಥೀನ್ ಹೊದಿಕೆ
- ನೀರೆತ್ತಲು ಡೀಸೆಲ್ ಪಂಪ್‌ಸೆಟ್
- ಹನಿ ಅಥವಾ ತುಂತುರು ನೀರಾವರಿ ವ್ಯವಸ್ಥೆ
- ಸುರಕ್ಷತೆಗಾಗಿ ಹೊಂಡದ ಸುತ್ತ ತಂತಿ ಬೇಲಿ
ರೈತರಿಗೆ ಉಪಯೋಗವಾಗುವ ಸಲಹೆ
- ಹೊಂಡ ನಿರ್ಮಿಸುವಾಗ ಮಳೆ ನೀರು ಸಹಜವಾಗಿ ಹರಿದು ಬರುವ ತಗ್ಗು ಪ್ರದೇಶ ಆಯ್ಕೆ ಮಾಡುವುದು ಉತ್ತಮ
- ಅರ್ಜಿ ಹಾಕುವ ಮೊದಲು RTC ನಿಮ್ಮ ಹೆಸರಿನಲ್ಲಿದೆಯೇ ಮತ್ತು
ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿದೆಯೇ ಅಂತ ಚೆಕ್ ಮಾಡಿ
ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQs)
ಈ ಹಿಂದೆ ಹೊಂಡ ಮಾಡಿಸಿಕೊಂಡಿದ್ದರೆ ಮತ್ತೆ ಅರ್ಜಿ ಹಾಕಬಹುದಾ?
ಇಲ್ಲ. ಈ ಯೋಜನೆ ಹೊಸದಾಗಿ ಕೃಷಿ ಹೊಂಡ ನಿರ್ಮಿಸುವ ರೈತರಿಗೆ ಮಾತ್ರ.
ಅರ್ಜಿ ಹಾಕಲು ಕೊನೆಯ ದಿನಾಂಕ ಇದೆಯಾ?
ನಿರ್ದಿಷ್ಟ ದಿನಾಂಕ ಇಲ್ಲ. ಜಿಲ್ಲೆಗೆ ನಿಗದಿಪಡಿಸಿದ ಗುರಿ ಮುಗಿಯುವವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ.
ಸಬ್ಸಿಡಿ ಎಲ್ಲರಿಗೂ ಒಂದೇನಾ?
ಇಲ್ಲ. SC/ST ರೈತರಿಗೆ ಶೇ. 90% ಮತ್ತು ಇತರರಿಗೆ ಶೇ. 80% ವರೆಗೆ ಸಿಗುತ್ತದೆ.
ರೈತರು ಎಷ್ಟು ಹಣ ಹಾಕಬೇಕು?
ಸರ್ಕಾರ ಬಹುಪಾಲು ವೆಚ್ಚ ಭರಿಸುವುದರಿಂದ ರೈತರ ಪಾಲಿನ ವೆಚ್ಚ ಕಡಿಮೆ ಇರುತ್ತದೆ.
👉 ಕೊನೆ ಮಾತು
ನೀರಿನ ಸಮಸ್ಯೆಯಿಂದ ಬೆಳೆ ಹಾನಿಯಾಗದಂತೆ ನೋಡಿಕೊಳ್ಳಲು ಕೃಷಿ ಭಾಗ್ಯ ಯೋಜನೆ ರೈತರಿಗೆ ಸಹಾಯಕ. ಅರ್ಹರಾಗಿರುವವರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸರಿಯಾದ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.










