ಧೂಳೆಬ್ಬಿಸಲಿದೆಯಾ Tata Curvv ನ Dark Edition: ಬನ್ನಿ ತಿಳಿಯೋಣ

Admin

April 20, 2025

Tata Curvv Dark Edition

ನಮಸ್ಕಾರ ಕಾರ್ ಪ್ರಿಯರೇ, ನೀವು ನನ್ನ ತರಹ ಕಾರ್,ಬೈಕ್ ಮತ್ತು ವಾಹನಗಳ ಬಗ್ಗೆ ಅವುಗಳ ಫೀಚರ್ಸ್ ಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದೀರಾ ಹಾಗಾದರೆ ಬನ್ನಿ ಇವತ್ತು ನಾವು Tata Curvv ನ Dark Edition ಬಗ್ಗೆ ತಿಳಿಯೋಣ.

Tata Curvv ಇದೀಗ ಮತ್ತೊಂದು ಹೊಸ Dark Edition ಕಾರ್ ಅನ್ನು ಲಾಂಚ್ ಮಾಡಿದ್ದೂ ಇದು ಅದರ ಹಿಂದಿನ Dark Edition ಗಳಿಗಿಂತ ವಿಭಿನ್ನವಾಗಿದೆ ಮತ್ತು ಒಂದು ಹೊಸ ಲುಕ್ ನೀಡುತ್ತಿದೆ.

Tata Curvv price

Tata Curvv Dark Edition ಮೂಲತಃವಾಗಿ Accomplished S ಮತ್ತು Accomplished+ A ರೀತಿಯ ಎರಡು ವೆರಿಯನ್ಟ್ಸ್ ಗಳಲ್ಲಿ ಲಭ್ಯವಿದೆ. ಹಾಗು ಇದರ ex-showroom ಬೆಲೆ Rs.16.49 lakh ರಿಂದ Rs.19.52 lakh ವರೆಗು ವ್ಯತ್ಯಾಸ ವಾಗಬಹುದಾಗಿದೆ.

Tata Curvv Dark Edition: ಫೀಚರ್ಸ್

Tata Curvv Dark Edition ನ ಹೊಸ ಫೀಚರ್ಸ್ ಗಳೆಂದರೆ ಪ್ಯಾನೊರಾಮಿಕ್ ಸನ್ರೂಫ್ ಹೊಂದಿದ್ದು 12.3-ಇಂಚ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್ಲೆಸ್ ಚಾರ್ಜರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ (TPMS), ಪವರ್ಡ್ ಟೈಲ್ಗೇಟ್, ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ನಂತಹ ಹಲವಾರು ಹೊಸ ಹೊಸ ಫೀಚರ್ಸ್ ಗಳನ್ನೂ ಹೊಂದಿದೆ.

ಎಂಜಿನ್ ಮತ್ತು ಪವರ್

ಇನ್ನು ಎಂಜಿನ್ ಮತ್ತು ಇದರ ಶಕ್ತಿಯ ಬಗ್ಗೆ ಹೇಳುವದಾದರೆ Tata Curvv Dark Edition ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ: 1.2 ಲೀಟರ್ ಜಿಡಿಐ ಟರ್ಬೋ-ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್. ಇನ್ನು ಗಿಯರ್‌ಬಾಕ್ಸ್ ಆಯ್ಕೆಗಳು ಆರು-ಸ್ಪೀಡ್ ಮಾನುವಲ್ ಮತ್ತು ಡಿಸಿಟಿ ಯುನಿಟ್ ಅನ್ನು ಒಳಗೊಂಡಿವೆ. ಹೊಸ ಜಿಡಿಐ ಎಂಜಿನ್ ಸುಮಾರು 123 ಬಿಎಚ್‌ಪಿ ಶಕ್ತಿ ಮತ್ತು 225 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ, ಮತ್ತು ಡೀಸೆಲ್ ಎಂಜಿನ್ 116 ಬಿಎಚ್‌ಪಿ ಶಕ್ತಿ ಮತ್ತು 260 ಎನ್‌ಎಂ ಟಾರ್ಕ್ ನೀಡುತ್ತದೆ.

Read More:

Leave a Comment